Wednesday, March 25, 2020

ಯುಗಾದಿ ಹಬ್ಬ

ಬರಲು ಒಂದು ಹೊಸ ವರುಷವು
ಮೂಡಲು ಒಂದು ಹೊಸ ಕಿರಣವು

ಬರಲು ಒಂದು ಹೊಸ ಋತುವು
ಚಿಗುರು ಒಡೆದು ಹೊಸ ಎಲೆಯು

ಸವಿದು ಬೇವು ಬೆಲ್ಲವ
ಮಾಡಲು ಹೂರಣ ಹೋಳಿಗೆಯ

ಬಂದಳು ಶಾರ್ವರಿ ನಗು ನಗುತಾ
ಶುಭವ ಕೋರಿ ಹರಸುತ್ತ

ಶಾರ್ವರಿ ನಾಮ ಸಂವತ್ಸರದ ಶುಭಾಶಯಗಳು

No comments:

Post a Comment