Saturday, March 28, 2020

ಗೆಳೆಯ ಶ್ರೀಹರಿಯ ನೆನಪು

ನಗುಮೊಗವೇ ಇವನ ಗುರುತು
ಇರಲಾಗದೆ ಇವನ ಮರೆತು

ಓಡುವುದೆ ಇವನ ನಿತ್ಯ ನಡಿಗೆ
ಹೋಗಲಾಗದೆ ಇವನಿಲ್ಲದ ನಿತ್ಯ ನಡಿಗೆ

ಎಲ್ಲವು ಇವನಿಗೆ ಸಾಧ್ಯವೆ
ಅವೆಲ್ಲವು ನಮಗೆ ಪ್ರೇರಣೆಯೆ

ನಗುವ ಧ್ವನಿ ಇವನದು
ಸದಾ ನಮಗೆ ಮರೆಯಲಾಗದು

ನೆನ್ನೆಯಷ್ಟೇ ಇಂದಿಗೂ ಮನಸಿಗೆ ಹತ್ತಿರ
"ಶ್ರೀ ಹರಿ"ಯೆ ಇವನನ್ನು ಕರೆದ ಹತ್ತಿರ

ಜೊತೆಗೆ ಇರುವನು ನಮ್ಮಲ್ಲಿ ಸದಾ
ಗೆಳೆಯನಾಗಿ ಶ್ರೀಹರಿ ಮನದಲ್ಲಿ ಸದಾ

1 comment:

  1. ಚೆನ್ನಾಗಿದೆ..ಸ್ನೇಹಿತರ ನೆನಪಲ್ಲಿ ಬರೆದಿದ್ದ.

    ReplyDelete